ಹಣ್ಣನ್ನು ಕಚ್ಚಿ ತಿನ್ನಲು ಕೆಂದುಟಿಗಳನ್ನು ತೆರೆದು ತಯಾರಾಗಿರುವ ಈ ಬ್ಯುಟಿ ಹೀರೋಗಳು ತನ್ನನ್ನು ಟಚ್ ಮಾಡುತ್ತಾರೆಂದರೆ ಅದು ಸಿನಿಮಾಕ್ಕೋಸ್ಕರ ಎಂದರೂ ಇಷ್ಟಪಡುವುದಿಲ್ಲ ! ನೋಡಿದಾಕ್ಷಣ ನಿಶೆಯೇರಿಸುವ..ಆದರೆ ಈ ಪ್ರಮಾಣದ ಮಡಿವಂತಿಕೆಯನ್ನಿಟ್ಟುಕೊಂಡಿರುವ ನಿಶಾ ನಾಜ್ರೆ ಒಟ್ಟಿನಲ್ಲಿ ತನ್ನ ಸೌಂದರ್ಯವನ್ನು ಬಚ್ಚಿಟ್ಟು ಕನ್ನಡ ಚಿತ್ರರಂಗಕ್ಕೆ ನಷ್ಟ ಉಂಟುಮಾಡಿತ್ತಿದ್ದಾರಲ್ಲ..ಎಂದೆನ್ನುತ್ತಾ ಆಕೆಯನ್ನು ಇಷ್ಟ ಪಟ್ಟ ಅಭಿಮಾನಿಗಳು ಇದು ಹೀಗಾದರೆ ಕಷ್ಟ ಎನ್ನುತ್ತಿದ್ದಾರೆ. ಸದ್ಯದ ಮಟ್ಟಿಗೆ ಕಿರುತೆರೆಯಲ್ಲೇ ನಿರೂಪಕಿಯಾಗಿ ಇವಳನ್ನು ನೋಡಿ ಆದಷ್ಟು ನಷ್ಟವನ್ನು ತುಂಬಿಕೊಳ್ಳುತ್ತಿದ್ದಾರೆ !
ಇಂಥವರು ಕನ್ನಡದ ಬೆಳ್ಳಿತೆರೆಯಲ್ಲಿ ತಮ್ಮ ಪ್ರತಿಭೆಯನ್ನು ತೆರೆದಿಡಲು ಹಿಂದೆ ಸರಿದ ಫಲವಾಗಿಯೇ ಮುಂಬೈ, ಚೆನ್ನೈ ಇಂದ ಹಾಟ್ ಕನ್ನಿಕೆಯರ ಪ್ರತಿಭೆಗಳು ತೆರೆತೆರೆಯಾಗಿ ಚಿತ್ರಪ್ರೇಮಿಗಳ ಮೇಲೆ ಅಪ್ಪಳಿಸುತ್ತಿದೆ ಎನ್ನಬಹುದು. ಹೀಗಿರುವಾಗ ನಿಶಾ ತಾನು ನಟಿಸುವ ಎಲ್ಲಾ ಚಿತ್ರಗಳಲ್ಲಿ ನಾಯಕ ತನ್ನನ್ನು ಮುಟ್ಟಬಾರದು..ಅಂಥಹ ರೋಲ್ ಇದ್ದರೆ ಮಾಡುತ್ತೇನೆ ಎಂದು ನಾಚಿ ನುಡಿಯುತ್ತಾಳೆ! ಇನ್ನೊಂದೆಡೆ ತನ್ನ ಕಾಮವರ್ಧಕ ರೂಪದಿಂದ ನಶೆಯೇರಿಸಿ ಅಭಿಮಾನಿಗಳ ಮೂಗಿಗೆ ತುಪ್ಪ ಸವರಿ ಜಾರಿ ಕೊಳ್ಳುತ್ತಾಳೆ. "ಸಾರಿ.." ಎಂದು ಇದೇ ಕಾರಣಕ್ಕೆ ಕಿರುತೆರೆಗೆ ಜಾರಿಕೊಂಡಿದ್ದಾಳೆ. ನಾಯಕ ನಾಯಕಿಯ ಮೈಮುಟ್ಟದಂಥಹ ಸಿನಿಮಾ ಮಾಡಿದರೆ ನೋಡುಗರ ಮನಮುಟ್ಟುವುದಾ? ನಿರ್ಮಾಪಕನಿಗೆ ಹಾಕಿದ ಬಂಡವಾಳ ಹುಟ್ಟುವುದಾ? ಇದು ನಿಶೆಗೆ ತಿಳಿಯುವುದಾ? ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿಕೊಂಡಿದ್ದ ನಿಶಾ..ಮನಸ್ಸು ಬದಲಾಯಿಸಿ ಕನ್ನಡ ಚಿತ್ರರಂಗಕ್ಕೆ ಧುಮ್ಮಿಕ್ಕಿದರೆ ಪರಭಾಷಾ ನಿಶೆಯರಿಗೆ ಅವಕಾಶ ಮಿಕ್ಕುವುದು ಕಷ್ಟ..ಏನಂತೀರಿ? ಬಡ ಅಂಧ ಮಕ್ಕಳ ಸೇವೆಯಲ್ಲಿ ಕೂಡ ಸಂತೋಷ ಕಾಣುತ್ತಿದ್ದೀರಿ..ಅದು ಸಂತೋಷ...ಸ್ವಲ್ಪ ನಿಮ್ಮ ಅಭಿಮಾನಿಗಳ ಮೇಲೂ ಕೃಪೆ ತೋರಿ ನಿಶಾ..! ಕನ್ನಡ ಚಿತ್ರರಂಗದಲ್ಲಿದೆ ನಿಮಗೆ ಸಾಕಷ್ಟು ಅವಕಾಶ...!
ಚಿನ್ಮಯ ಎಂ.ರಾವ್
No comments:
Post a Comment